ದೊಡ್ಡಆಲನಹಳ್ಳಿ ಕೆಂಪೇಗೌಡ ಶಿವಕುಮಾರ್ (ಜನನ ೧೫ ಮೇ ೧೯೬೨), ಇವರನ್ನು ಡಿ.ಕೆ ಶಿವಕುಮಾರ್ ಎಂದು ಕರೆಯುತ್ತಾರೆ. ಅವರು ಭಾರತೀಯ ರಾಜಕಾರಣಿಯಾಗಿದ್ದು, ಕರ್ನಾಟಕದ ೯ ನೇ ಮತ್ತು ಪ್ರಸ್ತುತ ಉಪಮುಖ್ಯಮಂತ್ರಿಯಾಗಿದ್ದಾರೆ. ೨೦ ಮೇ ೨೦೨೩ ರಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿದ್ದರು ಮತ್ತು ೨೦೨೦ ರಿಂದ ಕರ್ನಾಟಕ ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಇವರು ೨೦೧೪ ರಿಂದ ೨೦೧೯ ರವರೆಗೆ ಕರ್ನಾಟಕ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು ಹಾಗೂ ಅವರು ೨೦೦೮ ರಿಂದ ಕರ್ನಾಟಕ ವಿಧಾನಸಭೆಯಲ್ಲಿ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. == ವೈಯಕ್ತಿಕ ಜೀವನ == ಡಿ.ಕೆ. ಶಿವಕುಮಾರ್ ಅವರು ೧೯೬೧ ಮೇ ೧೫ರಂದು ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ದೊಡ್ಡಲಹಳ್ಳಿಯಲ್ಲಿ ಜನಿಸಿದರು. ಇವರ ತಂದೆ ಕೆಂಪೇಗೌಡ ತಾಯಿ ಗೌರಮ್ಮ. ಇವರ ಸಹೋದರರು ಡಿ.ಕೆ.ಸುರೇಶ್ ಇವರು ಕೂಡ ರಾಜಕಾರಣಿ. ಶಿವಕುಮಾರ್ ೧೯೯೩ ರಲ್ಲಿ ಉಷಾ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಆಭರಣ ಎಂಬ ಇಬ್ಬರು ಹೆಣ್ಣುಮಕ್ಕಳು ಮತ್ತು ಆಕಾಶ್ ಎಂಬ ಒಬ್ಬ ಮಗ. ಅವರ ಹಿರಿಯ ಮಗಳು ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ಧಾರ್ಥ ಅವರ ಮಗ ಅಮರ್ತ್ಯ ಅವರನ್ನು ವಿವಾಹವಾಗಿದ್ದಾರೆ. ಡಿ.ಕೆ ಶಿವಕುಮಾರ್ ಇವರು ಭಾರತದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರು. === ಶಿಕ್ಷಣ === ಡಿ.ಕೆ.ಶಿವಕುಮಾರ್ ಅವರು ಕನಕಪುರದಲ್ಲಿ ಕರಿಯಪ್ಪ ಅವರ ವಿದ್ಯಾಸಂಸ್ಥೆಯಲ್ಲಿ ಶಾಲ ಶಿಕ್ಷಣವನ್ನು ಪೊರೈಸಿದರು. ನಂತರ ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು ಮುಗಿಸಿದ್ದರು. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದಾರೆ. == ರಾಜಕೀಯ ವೃತ್ತಿ == ಶಿವಕುಮಾರ್ ಅವರು ೧೯೮೦ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ನಾಯಕರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು ಮತ್ತು ಕ್ರಮೇಣ ಕಾಂಗ್ರೆಸ್ ಪಕ್ಷದ ಶ್ರೇಣಿಯ ಮೂಲಕ ಏರಿದರು. ೧೯೮೯ ರಲ್ಲಿ ಮೈಸೂರು ಜಿಲ್ಲೆಯ ಸಾತನೂರು ಕ್ಷೇತ್ರದಿಂದ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದಾಗ ಅವರು ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದರು. ಆಗ ಅವರು ಕೇವಲ ೨೭ ವರ್ಷ ವಯಸ್ಸಿನವರಾಗಿದ್ದರು ಮತ್ತು ಕಾಂಗ್ರೆಸ್ ಟಿಕೆಟ್‌ನಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಶಿವಕುಮಾರ್ ನಂತರದ ೧೯೯೪, ೧೯೯೯ ಮತ್ತು ೨೦೦೪ರ ವಿಧಾನಸಭಾ ಚುನಾವಣೆಗಳಲ್ಲಿ ಅದೇ ಕ್ಷೇತ್ರದ ಮರುಚುನಾವಣೆಯಲ್ಲಿ ಗೆದ್ದರು. ಅವರು ೨೦೦೮, ೨೦೧೩, ೨೦೧೮ ಮತ್ತು ೨೦೨೩ ರಲ್ಲಿ ಕನಕಪುರ ಕ್ಷೇತ್ರದಲ್ಲಿ ಗೆದ್ದರು. ವಿಲಾಸರಾವ್ ದೇಶಮುಖ್, ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಾಗ, ಶಿವಕುಮಾರ್ ಅವರು ೨೦೦೨ ರಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ಮತದಾನದ ಒಂದು ವಾರದವರೆಗೆ ಬೆಂಗಳೂರಿನ ಹೊರವಲಯದಲ್ಲಿ ಶಿವಕುಮಾರ್ ಅವರು ಮಹಾರಾಷ್ಟ್ರದ ರೆಸಾರ್ಟ್‌ನಲ್ಲಿ ಶಾಸಕರಿಗೆ ಆತಿಥ್ಯವನ್ನು ವಹಿಸಿದ್ದರು. ಇದು ದೇಶಮುಖ್ ಅವರ ಸರ್ಕಾರವನ್ನು ಉಳಿಸಿತು. ಗುಜರಾತ್ ನಿಂದ ೨೦೧೭ ರಲ್ಲಿ ರಾಜ್ಯಸಭೆ ಗೆ ಆಯ್ಕೆಯಾಗುವ ಮುನ್ನ, ಅವರು ತಮ್ಮ ಪಕ್ಷದ ನಾಯಕತ್ವಕ್ಕೆ ೪೨ ಗುಜರಾತ್ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿನಲ್ಲಿರುವ ತಮ್ಮ ರೆಸಾರ್ಟ್‌ಗೆ ಸ್ಥಳಾಂತರಿಸಲು ಸಹಾಯ ಮಾಡಿದರು. ಇದು ಅಹ್ಮದ್ ಪಟೇಲ್ ಚುನಾವಣೆಯಲ್ಲಿ ಗೆಲ್ಲಲು ಸಹಾಯ ಮಾಡಿತು. ೨೦೧೮ ರ ನಂತರ ಕರ್ನಾಟಕದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಸಮ್ಮಿಶ್ರ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಪಕ್ಷದ ನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಆಪ್ತರಾಗಿದ್ದರು. ೨೦ ಮೇ ೨೦೨೩ ರಂದು, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿಜಯದ ನಂತರ ಶಿವಕುಮಾರ್ ಕರ್ನಾಟಕದ ಉಪಮುಖ್ಯಮಂತ್ರಿ ಆದರು. === ನಿರ್ವಹಿಸಿದ ಸ್ಥಾನಗಳು === == ಚುನಾವಣಾ ಅಂಕಿಅಂಶಗಳು == == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==